ದಿಪಾಲಿ ಬಾರ್ಥಕುರ್ (೩೦ ಜನವರಿ ೧೯೪೧ - ೨೧ ಡಿಸೆಂಬರ್ ೨೦೧೮) ಅಸ್ಸಾಂನ ಭಾರತೀಯ ಗಾಯಕಿ. ಆಕೆಯ ಹಾಡುಗಳನ್ನು ಮುಖ್ಯವಾಗಿ ಅಸ್ಸಾಮಿ ಭಾಷೆಯಲ್ಲಿ ಇವೆ. ಅವರು ೧೯೯೮ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಇವರು ಪಡೆದರು. == ಆರಂಭಿಕ ಜೀವನ == ಬಾರ್ಥಕೂರ್ ಅವರು ೧೯೪೧ ರಲ್ಲಿ ಅಸ್ಸಾಂನ ಶಿವಸಾಗರದ ಸೋನಾರಿಯಲ್ಲಿ ಬಿಶ್ವನಾಥ್ ಬಾರ್ಥಕುರ್ ಮತ್ತು ಚಂದ್ರಕಾಂತಿ ದೇವಿ ದಂಪತಿಗಳಿಗೆ ಜನಿಸಿದರು. == ಸಂಗೀತ ವೃತ್ತಿ == ಬಾರ್ಥಕುರ್ ಅವರು ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೫೮ ರಲ್ಲಿ ಅವರು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ, ಅವರು ಆಲ್ ಇಂಡಿಯಾ ರೇಡಿಯೋ, ಗುವಾಹಟಿಯಲ್ಲಿ "ಮೋರ್ ಬೋಪೈ ಲಹೋರಿ" ಹಾಡನ್ನು ಹಾಡಿದರು. ಲಚಿತ್ ಬೋರ್ಫುಕನ್ (೧೯೪೯) ಚಿತ್ರಕ್ಕಾಗಿ "ಜೌಬೋನ್ ಅಮೋನಿ ಕೋರೆ ಚೆನೈದೋನ್" ಹಾಡನ್ನು ಹಾಡಿದ್ದಾರೆ. "ಸೋನೋರ್ ಖರು ನಲಗೆ ಮುಕ್" "ಜೌಬೋನ್ ಅಮೋನಿ ಕೋರೆ, ಚೆನೈಧೋನ್" "ಜುಂಧೋನ್ ಜುನಾಲೈಟ್" "ಕೊನ್ಮನ ಬೊರೊಕ್ಸೈರ್ ಸಿಪ್" "ಸೇನಾಯ್ ಮೋಯಿ ಜೌ ದೇಯಿ" "ಓ' ಬಂಧು ಸೊಮೊಯಿ ಪಾಲೆ ಅಮರ್ ಫಾಲೆ" == ವೈಯಕ್ತಿಕ ಜೀವನ == ಬಾರ್ಥಕುರ್ ೧೯೬೯ ರಲ್ಲಿ ತನ್ನ ಕೊನೆಯ ಹಾಡು "ಲುಯಿಟೊ ನೆಜಾಬಿ ಬೋಯಿ" ಎಂಬುದನ್ನು ಹಾಡಿದರು. ಅದರ ನಂತರ ಅವರು ತೀವ್ರವಾದ ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದು, ಅದು ಅವರ ಗಾಯನಕ್ಕೆ ಅಡ್ಡಿಯಾಯಿತು ಮತ್ತು ಗಾಲಿಕುರ್ಚಿಯನ್ನು ಬಳಸುವಂತೆ ಮಾಡಿತು. ೧೯೭೬ ರಲ್ಲಿ ಅವರು ಅಸ್ಸಾಂನ ಪ್ರಸಿದ್ಧ ಭಾರತೀಯ ಕಲಾವಿದ ಮತ್ತು ವರ್ಣಚಿತ್ರಕಾರ ಮತ್ತು ಹೆಸರಾಂತ ಅಸ್ಸಾಮಿ ಬರಹಗಾರ ಬಿನಂದ ಚಂದ್ರ ಬರುವಾ ಅವರ ಪುತ್ರ ನೀಲ್ ಪವನ್ ಬರುವಾ ಅವರನ್ನು ವಿವಾಹವಾದರು. ಬಾರ್ಥಕುರ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುವಾಹಟಿಯ ನೆಮ್‌ಕೇರ್ ಆಸ್ಪತ್ರೆಯಲ್ಲಿ ೨೧ ಡಿಸೆಂಬರ್ ೨೦೧೮ ರಂದು ನಿಧನರಾದರು ಆಕೆಯನ್ನು "ನೈಟಿಂಗೇಲ್ ಆಫ್ ಅಸ್ಸಾಂ" ಎಂದು ಕರೆಯಲಾಗುತ್ತಿತ್ತು. == ಪ್ರಶಸ್ತಿಗಳು == ಬಾರ್ಥಕುರ್ ಅವರು ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮುಖ್ಯವಾಗಿ ೧೯೯೦-೯೨ರಲ್ಲಿ ಜಾನಪದ ಮತ್ತು ಸಾಂಪ್ರದಾಯಿಕ ಸಂಗೀತಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಕೆಲವು ಪ್ರಶಸ್ತಿಗಳು/ಮನ್ನಣೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: ಪದ್ಮಶ್ರೀ ( ೧೯೯೮ ) ಭಾರತ ಸರ್ಕಾರದಿಂದ ಕಲೆಗೆ ನೀಡಿದ ಕೊಡುಗೆಗಾಗಿ. ಅಸ್ಸಾಂ ಸರ್ಕಾರದಿಂದ ಸಿಲಿಪಿ ಬೋಟಾ (೨೦೧೦) ಸದೌ ಅಸೋಮ್ ಲೇಖಕಿ ಸೋಮರೋಹ್ ಸಮಿತಿಯಿಂದ ಐದೇಯು ಹ್ಯಾಂಡಿಕ್ ಸಿಲ್ಪಿ ಪ್ರಶಸ್ತಿ (೨೦೧೨). == ಉಲ್ಲೇಖಗಳು ==